Details of most frequently repeated questions in Class 10 Social Science | 10 ನೆe ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಬಾರಿ ಪುನರಾವರ್ತಿತ ಪ್ರಶ್ನೆಗಳ ವಿವರ

Publisher
0

10 ನೆe ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಬಾರಿ ಪುನರಾವರ್ತಿತ ಪ್ರಶ್ನೆಗಳ ವಿವರ | Details of most frequently repeated questions in Class 10 Social Science

10 ನೆe ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಬಾರಿ ಪುನರಾವರ್ತಿತ ಪ್ರಶ್ನೆಗಳ ವಿವರ | Details of most frequently repeated questions in Class 10 Social Scienceು

10th class India's forest resources | 10 ನೆe ತರಗತಿ ಭಾರತದ ಅರಣ್ಯ ಸಂಪತ್ತು

You can also watch this video in YouTube | ನೀವು ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿಯೂ ವೀಕ್ಷಿಸಬಹುದು

10 ನೆe ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಬಾರಿ ಪುನರಾವರ್ತಿತ ಪ್ರಶ್ನೆಗಳ ವಿವರ | Details of most frequently repeated questions in Class 10 Social Science
Video Summary:

Timestamp 00:00:02 ಎಲ್ಲರಿಗೂ ನಮಸ್ಕಾರ ನಾನು ಸಿದ್ದಾರೂಢ ಶಾಬಾನಿ ಸರ್ಕಾರಿ ಪ್ರೌಢಶಾಲೆ ರಾಜಾಪುರ್ ಈ ದಿನ ನಾವು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಪ್ರಶ್ನೆ ಪತ್ರಿಕೆಯಲ್ಲಿ ಅತಿ ಹೆಚ್ಚು ಬಾರಿ ಪುನರಾವರ್ತಿತ ಪ್ರಶ್ನೆಗಳ ಬಗ್ಗೆ ತಿಳಿದುಕೊಳ್ಳೋಣ ಎರಡು 2015 ರಿಂದ 2024 ರವರೆಗೆ ಎರಡು ಮತ್ತು ಮೂರು ನಾಲ್ಕು ಅಂಕಗಳ 40 ಪ್ರಶ್ನೆಗಳು ಅತಿ ಹೆಚ್ಚು ಬಾರಿ ಕೇಳಲಾಗಿದೆ ಅಂತಹ ಪ್ರಶ್ನೆಗಳ ಕುರಿತು ತಿಳಿದುಕೊಳ್ಳೋಣ ಮೊದಲನೆಯದಾಗಿ ಭಾರತ ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ನೀತಿಯ ಪರಿಣಾಮಗಳನ್ನು ತಿಳಿಸಿ ನೋಡ್ರಿ ಭಾರತದಲ್ಲಿ ಬ್ರಿಟಿಷ್ ಶಿಕ್ಷಣ ನೀತಿಯ ಪರಿಣಾಮಗಳನ್ನು ತಿಳಿಸಿರಿ ಈ ಪ್ರಶ್ನೆ 20 ಬಾರಿ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಪ್ರಶ್ನೆ ಪತ್ರಿಕೆಯಲ್ಲಿ

Timestamp 00:01:22 ಕೇಳಲಾಗಿದೆ ಭಾರತದಲ್ಲಿ ಬ್ರಿಟಿಷ್ ನೀತಿಯ ಪರಿಣಾಮಗಳು ಯಾವುವು ಅಂತ ಅಂದ್ರೆ ಭಾರತೀಯ ಆಧುನಿಕತೆ ಜಾತ್ಯಾತೀತತೆ ಪ್ರಜಾಪ್ರಭುತ್ವ ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದದ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗೆ ಬ್ರಿಟಿಷ್ ಶಿಕ್ಷಣ ನೀತಿಯಿಂದ ಪ್ರೋತ್ಸಾಹ ದೊರೆಯಿತು ಹಲವಾರು ವೃತ್ತಪತ್ರಿಕೆಗಳು ಹುಟ್ಟಿಕೊಂಡವು ಹಾಗೆ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಕೊಂಡವು ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲು ಕೂಡ ಈ ಶಿಕ್ಷಣದ ನೀತಿಯಿಂದ ಆಯಿತು ಹಾಗೆಯೇ ಜಿ ಎಸ್ ಮಿಲ್ ರೂಸೋ ಮಾಂಟೆಸ್ಕೋ ರವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ

Timestamp 00:02:21 ಕ್ರಮದಲ್ಲಿ ಹೊಸತನವನ್ನು ತಂದಿತು ಈ ಪ್ರಶ್ನೆ 20 ಬಾರಿ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಪ್ರಶ್ನೆ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದೆ ಹಾಗೆಯೇ ಎರಡನೇ ಪ್ರಶ್ನೆ ಸರ್ಕಾರವು ಅಸ್ಪೃಶ್ಯತೆಯನ್ನು ನಿವಾರಿಸಲು ಹೇಗೆ ಪ್ರಯತ್ನಿಸುತ್ತಿದೆ ಈ ಪ್ರಶ್ನೆಯನ್ನು ಕೂಡ 20 ಬಾರಿ ಕೇಳಲಾಗಿದೆ ಹಾಗಾಗಿ ಪರೀಕ್ಷಾ ದೃಷ್ಟಿಯಿಂದ ಈ ಪ್ರಶ್ನೆ ಬಹಳ ಮಹತ್ವದ್ದು ಬಹಳ ಸರಳವಾಗಿ ಈ ಪ್ರಶ್ನೆಗೆ ಉತ್ತರವನ್ನು ಬರೆಯಬಹುದು ಸಂವಿಧಾನದ 17 ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ ಭಾರತ ಸರ್ಕಾರ ಅಸ್ಪೃಶ್ಯತಾ ಅಪರಾಧಗಳ ಕಾಯ್ದೆಯನ್ನು 1955 ರಲ್ಲಿ ಜಾರಿಗೊಳಿಸಿದೆ ಇದೇ ಕಾಯ್ದೆಗೆ ತಿದ್ದುಪಡಿ ತಂದು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯೊಂದು 1976

Timestamp 00:03:18 ರಲ್ಲಿ ಮರುನಾಮಕರಣ ಮಾಡಲಾಯಿತು ಸಂವಿಧಾನಾತ್ಮಕವಾಗಿ ಸಾರ್ವತ್ರಿಕ ಮತದಾನದ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೆ ನೀಡಲಾಯಿತು ಈ ರೀತಿ ಕೆಲವೊಂದಿಷ್ಟು ಅಂಶಗಳನ್ನ ನಾವು ನೆನಪಿಟ್ಟುಕೊಳ್ಳಬೇಕು ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಒಂದು ನೋಟ್ಬುಕ್ ಮತ್ತು ಪೆನ್ನನ್ನ ತೆಗೆದುಕೊಳ್ಳಿ ಈ ಎಲ್ಲಾ ಪ್ರಶ್ನೆಗಳನ್ನ ಬರೆದಿಟ್ಟುಕೊಳ್ಳಿ ಈ ಪ್ರಶ್ನೆಗಳಿಗೆ ಉತ್ತರಗಳನ್ನ ತಯಾರಿಸಿಕೊಂಡು ಪದೇ ಪದೇ ಮನನ ಮಾಡಿಕೊಳ್ಳುವುದರಿಂದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅನುಕೂಲವಾಗುತ್ತದೆ ಮೂರನೇ ಪ್ರಶ್ನೆ ಬ್ಯಾಂಕ್ ನಿರ್ವಹಿಸುವ ಕಾರ್ಯಗಳನ್ನ ಪಟ್ಟಿ ಮಾಡಿ ಬ್ಯಾಂಕ್ ನಿರ್ವಹಿಸುವ ಕಾರ್ಯಗಳನ್ನು ಪಟ್ಟಿ ಮಾಡಿ ಅಂತಕಂತ ಒಂದು ಪ್ರಶ್ನೆ

Timestamp 00:04:08 ಕೇಳಲಾಗುತ್ತದೆ ಬಹಳ ಸರಳವಾಗಿ ಈ ಪ್ರಶ್ನೆಗೆ ನೀವು ಉತ್ತರವನ್ನು ಬರೆಯಬೇಕಾಗುತ್ತದೆ ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಅಂಗೀಕರಿಸುವುದು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳಿಗೆ ಸಾಲಗಳನ್ನು ಕೊಡುವುದು ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲಿ ಮಾಡುವುದು ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು ವಿದೇಶ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು ಬೆಲೆಬಾಳುವ ವಸ್ತುಗಳನ್ನು ಬ್ಯಾಂಕುಗಳು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳುವುದು ಹೀಗೆ ಹಲವಾರು ಅಂಶಗಳನ್ನು ನೀವು ಪಟ್ಟಿ ಮಾಡ್ರಿ ಈ ಪ್ರಶ್ನೆಯನ್ನ 19 ಬಾರಿ ನೆನಪಿಟ್ಟುಕೊಳ್ಳಿ 19 ಬಾರಿ ಕೇಳಲಾಗಿದೆ

Timestamp 00:05:01 ಹಾಗೆ ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಅತಿ ಹೆಚ್ಚು ಪ್ರಭಾವವನ್ನು ಬೀರತಕ್ಕಂತಹ ಅಂಶಗಳು ಯಾವುವು ಅಂತಕಂತ ಒಂದು ಪ್ರಶ್ನೆಯನ್ನು ಕೇಳಲಾಗುತ್ತದೆ ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಅತಿ ಹೆಚ್ಚು ಪ್ರಭಾವ ಬೀರುವ ಅಂಶಗಳು ಕಚ್ಚಾ ವಸ್ತುಗಳು ಕಡಿಮೆ ದರದಲ್ಲಿ ಭೂಮಿ ದೊರೆಯುವಿಕೆ ಶಕ್ತಿ ಸಂಪನ್ಮೂಲಗಳು ಮಾರುಕಟ್ಟೆ ಸಂಚಾರ ಸೌಲಭ್ಯ ಕಾರ್ಮಿಕರ ಪೂರೈಕೆ ಬಂದರುಗಳ ಸೌಲಭ್ಯ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ ಕಡಿಮೆ ದರದಲ್ಲಿ ಭೂಮಿ ದೊರೆಯುವಿಕೆ ತಾಂತ್ರಿಕತೆ ಸರ್ಕಾರದ ನೀತಿ ನಿಯಮಗಳಿಂದಲೂ ಕೂಡ ಪ್ರಭಾವಿತವಾಗಿರುವುದು ಇವೆಲ್ಲವೂ ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರತಕ್ಕಂತಹ ಅಂಶಗಳು ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು 18 18

Timestamp 00:06:00 ಬಾರಿ ಕೇಳಲಾಗಿದೆ ನಂತರ ಪ್ರಶ್ನೆ 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿರಿ ಈ ಒಂದು ಪ್ರಶ್ನೆಯನ್ನು ಕೂಡ 16 ಬಾರಿ ಪರೀಕ್ಷೆಯಲ್ಲಿ ಕೇಳಲಾಗಿದೆ 16 ಬಾರಿ ಕೇಳಲಾಗಿದೆ ವಿಫಲತೆಗೆ ಕಾರಣಗಳು ಮತ್ತೊಂದು ಪ್ರಶ್ನೆಯನ್ನು ಪರಿಣಾಮಗಳನ್ನು ಕೂಡ ಕೇಳುವ ಸಂಭವ ಜಾಸ್ತಿ ಇರುತ್ತದೆ ನೋಡ್ರಿ 1857 ರ ದಂಗೆಯ ವಿಫಲತೆಗೆ ಕಾರಣಗಳು ಯಾವುವು ಅಂತಂದ್ರೆ ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ದೇಶದ ರಾಜರ ಸ್ವಹಿತಾಸಕ್ತಿಗಳಿಗಾಗಿ ನಡೆದಿತ್ತು ಭಾರತವನ್ನು ವ್ಯಾಪಿಸಿದ ಹೋರಾಟವಾಗಿರಲಿಲ್ಲ ಇದು ಇದು ಯೋಜಿತ ಹೋರಾಟವಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರಣೆಯನ್ನು ಪಡೆದಿತ್ತು ಬ್ರಿಟಿಷ್ ಸೈನಿಕರಲ್ಲಿದ್ದ ಒಗ್ಗಟ್ಟು ಭಾರತೀಯ ಸೈನಿಕರಲ್ಲಿ

Timestamp 00:07:05 ಇರಲಿಲ್ಲ ಸೂಕ್ತ ಮಾರ್ಗದರ್ಶನ ಮತ್ತು ಸೇನಾಯಕತ್ವ ಶಿಸ್ತಿನ ಕೊರತೆ ಇದ್ದಿರಲಿಲ್ಲ ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ ಹಲವಾರು ದೇಶೀಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ಸಿಗಲಿಲ್ಲ ಸಿಪಾಯಿಗಳು ಅನೇಕ ಕಡೆ ಲೂಟೆ ದರೋಡೆ ಮಾಡಿ ಜನಸಾಮಾನ್ಯರ ವಿಶ್ವಾಸವನ್ನು ಕಳೆದುಕೊಂಡರು ಹೀಗೆ ಹಲವಾರು ಕಾರಣಗಳಿಂದ ದಂಗೆಯು ವಿಫಲವಾಯಿತು ಬಹಳ ಸರಳವಾಗಿರತಕ್ಕಂತಹ ಪ್ರಶ್ನೆ ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು 16 ಬಾರಿ ಕೇಳಿದ್ದಾರೆ ನಂತರ ಲಿಂಗ ತಾರತಮ್ಯ ಹೋಗಲಾಡಿಸಲು ಕೈಗೊಂಡಿರ್ತಕ್ಕಂತ ಕ್ರಮಗಳು ಯಾವುವು ಈ ಪ್ರಶ್ನೆಯನ್ನು ಕೂಡ 13 ಬಾರಿ ಕೇಳಲಾಗಿದೆ ನಂತರ ನಿರುದ್ಯೋಗ ಸಮಸ್ಯೆಗೆ ಪರಿಹಾರ

Timestamp 00:08:06 ಕ್ರಮಗಳನ್ನು ತಿಳಿಸಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ತಿಳಿಸಿ 13 ಬಾರಿ ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು ಪುನರಾವರ್ತಿತ ಪ್ರಶ್ನೆಯನ್ನಾಗಿ ಕೇಳಿದ್ದಾರೆ ಅದೇ ರೀತಿಯಾಗಿ ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು ಯಾವುವು ಅಂತಕಂತ ಪ್ರಶ್ನೆಯನ್ನು ಕೂಡ ಕೂಡ 12 ಬಾರಿ ಕೇಳಲಾಗಿದೆ ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು ಅಥವಾ ಸಹಾಯಕ ಸೈನ್ಯ ಪದ್ಧತಿಯ ಶರತ್ತುಗಳು ಯಾವುವು ಎರಡು ಒಂದೇ 12 ಬಾರಿ ಕೇಳಲಾದ ಪ್ರಶ್ನೆ ಇದು ಹಾಗಾಗಿ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಯಾರು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಲು ತಯಾರಾಗಿದ್ದರೋ ಅವರು ಭಾರತೀಯ ರಾಜರು ಬ್ರಿಟಿಷ್ ಸೈನಿಕ ತುಕಡಿಯನ್ನ ತಮ್ಮ ರಾಜ್ಯದಲ್ಲಿ

Timestamp 00:09:07 ಇರಿಸಿಕೊಳ್ಳಬೇಕಾಗಿತ್ತು ಆ ಸೈನ್ಯದ ಖರ್ಚು ವೆಚ್ಚಗಳನ್ನ ಸಂಬಂಧಪಟ್ಟ ರಾಜ್ಯವೇ ಭರಿಸಬೇಕಾಗಿತ್ತು ಅಷ್ಟೇ ಅಲ್ಲದೆ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ದೇಶೀಯ ರಾಜರು ತಮ್ಮ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ ನನ್ನನ್ನು ನೇಮಿಸಿಕೊಳ್ಳಬೇಕಾಗಿತ್ತು ಬ್ರಿಟಿಷರು ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನ ನೇಮಿಸಿಕೊಳ್ಳುವ ಹಾಗಿದ್ದಿರಲಿಲ್ಲ ದೇಶಿಯ ರಾಜರು ಬೇರೆ ರಾಜ್ಯಗಳೊಂದಿಗೆ ಯುದ್ಧ ಮತ್ತು ಸಂಧಾನ ಮಾಡಿಕೊಳ್ಳಬೇಕಾದರೆ ಬ್ರಿಟಿಷರು ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು ಇಷ್ಟೆಲ್ಲಾ ಒಪ್ಪಿಕೊಂಡರೆ ಕಂಪನಿಯು ಒಪ್ಪಿಕೊಂಡ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದರು ಒಂದು ರೀತಿ ಸಹಾಯಕ ಸೈನ್ಯ ಪದ್ಧತಿಗೆ

Timestamp 00:10:01 ಒಳಪಟ್ಟ ದೇಶೀಯ ರಾಜರು ಹಲ್ಲಿಲ್ಲದ ಹಾವಿನಂತಾದರೂ ಎಂಬುವುದನ್ನ ನಾವು ತಿಳಿದುಕೊಳ್ಳಬೇಕಾಗುತ್ತದೆ ನಂತರ ಪ್ರಶ್ನೆ ಉದ್ಯಮಶೀಲತೆಯ ಕಾರ್ಯಗಳನ್ನು ಪಟ್ಟಿ ಮಾಡಿ ನೋಡ್ರಿ ಉದ್ಯಮಶೀಲ ಅನ್ನೋ ಪಾಠ ಬಹಳ ಮಹತ್ವದ್ದು ಉದ್ಯಮಿಯ ಗುಣಲಕ್ಷಣಗಳು ಯಾವುವು ಅಥವಾ ಉದ್ಯಮಶೀಲತೆಯ ಕಾರ್ಯಗಳನ್ನು ಪಟ್ಟಿ ಮಾಡಿ ಅಂತಕಂತ ಪ್ರಶ್ನೆಯನ್ನ ಕೇಳುವಂತಹ ಸಂಭವವಿದೆ ಈ ಪ್ರಶ್ನೆಯನ್ನು 12 ಬಾರಿ ಕೇಳಲಾಗಿದೆ ಹಾಗೆ ಭಾರತದ ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ಅಂತಕಂತ ಒಂದು ಪ್ರಶ್ನೆ ಭಾರತದ ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ಈ ಪ್ರಶ್ನೆಯನ್ನು ಕೂಡ ಪರೀಕ್ಷಾ ಮಂಡಳಿಯವರು ಹತ್ತು ಬಾರಿ ಪುನರಾವರ್ತಿತ ಪ್ರಶ್ನೆಯನ್ನಾಗಿ ಕೇಳಿದ್ದಾರೆ ಪರೀಕ್ಷಾ ದೃಷ್ಟಿಯಿಂದ ಬಹಳ

Timestamp 00:10:57 ಮಹತ್ವದ್ದು ಕಾಡ್ಗಿಂಚು ಉಂಟುಮಾಡ್ತಕ್ಕಂತ ಘರ್ಷಿತ ಮರಗಳನ್ನು ಕಡಿದು ಹಾಕುವುದು ಅರಣ್ಯದ ಮರಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದು ಸಸಿಗಳನ್ನು ನೆಡುವುದು ಬೀಜಗಳನ್ನು ಹರಡುವುದು ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು ಅರಣ್ಯಗಳಲ್ಲಿ ಸಾಕು ಪ್ರಾಣಿಗಳ ಮೇಯಿಸುವಿಕೆಯನ್ನು ನಿಯಂತ್ರಿಸುವುದು ಸಾರ್ವಜನಿಕರಿಗೆ ಗಿಡ ನೆಡಲು ಪ್ರೋತ್ಸಾಹಿಸುವುದು ಮತ್ತು ಅವುಗಳ ಪ್ರಾಮುಖ್ಯ ಬಗ್ಗೆ ಅರಿವು ಮೂಡಿಸತಕ್ಕಂತಹ ಕೆಲಸವನ್ನು ಮಾಡುವುದು ಸಾಮಾಜಿಕ ಅರಣ್ಯ ಯೋಜನೆಯನ್ನು ತ್ವರಿತವಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಮುಂದಿನ ಪ್ರಶ್ನೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರ ನೋಡ್ರಿ ಗ್ರಾಮೀಣ ಅಭಿವೃದ್ಧಿಯಲ್ಲಿ

Timestamp 00:11:50 ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರ ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು ಹತ್ತು ಬಾರಿ ಕೇಳಿದ್ದಾರೆ ಹಾಗಾಗಿ ಬಹಳ ಬಹಳ ಮಹತ್ವದ ಪ್ರಶ್ನೆ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವ ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಕಾರ್ಯಗಳು ಯಾವುವು ಎಲ್ಲದಕ್ಕೂ ಒಂದೇ ಉತ್ತರ ಬರೆಯಬೇಕಾಗುತ್ತದೆ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಸಹಾಯಕವಾಗಿದೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ ಕೃಷಿ ಮತ್ತು ಉಪಕಸುಬುಗಳನ್ನು ಅಭಿವೃದ್ಧಿ ಪಡಿಸುತ್ತದೆ ಕೌಶಲ್ಯ ಮತ್ತು ದುಡಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತದೆ ಉದ್ಯೋಗ ಆದಾಯ

Timestamp 00:12:37 ಹೆಚ್ಚಿಸುತ್ತದೆ ವಲಸೆ ಹೋಗುವುದನ್ನು ತಡೆಗಟ್ಟುತ್ತದೆ ಮಾರುಕಟ್ಟೆ ಮತ್ತು ನೀರಾವರಿ ಅಭಿವೃದ್ಧಿ ಪಡಿಸುತ್ತದೆ ಗ್ರಾಮೀಣ ಅರ್ಥವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ ಈ ರೀತಿ ಗ್ರಾಮೀಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮಹತ್ವ ತಿಳಿಸಿ ಅಂತಕಂತ ಪ್ರಶ್ನೆ ಬಂದರೆ ನೀವು ಬರೆಯಬೇಕಾಗುತ್ತದೆ ಮುಂದಿನ ಪ್ರಶ್ನೆ ಕದನದ ಪರಿಣಾಮಗಳನ್ನು ತಿಳಿಸಿ ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು 19 ಬಾರಿ ಕೇಳಿದ್ದಾರೆ ಹಾಗಾಗಿ ಪರೀಕ್ಷಾ ದೃಷ್ಟಿಯಿಂದ ಬಹಳ ಮಹತ್ವದ್ದು ಬಕ್ಸಾರ್ ಕದನದ ಪರಿಣಾಮಗಳೇನು ಈಸ್ಟ್ ಇಂಡಿಯಾ ಕಂಪನಿ ಬಂಗಾಳದ ಮೇಲಿನ ತನ್ನ ದಿವಾನಿ ಹಕ್ಕನ್ನು ಎರಡನೇ ಶಾ ಅಲಂ ನಿಂದ ಪಡೆದುಕೊಂಡಿತ್ತು ಶಾ ಅಲಂ ವಾರ್ಷಿಕವಾಗಿ 26

Timestamp 00:13:29 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಎಲ್ಲಾ ಹಕ್ಕುಗಳನ್ನು ಬಿಟ್ಟುಕೊಟ್ಟ ಔದದ ನವಾಬನು ಶೂಜುದ್ದೌಲನು ಔದದ ನವಾಬನಾದ ಶೂಜು ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನ ನೀಡಬೇಕಾಯಿತು ಮೀರ್ ಜಾಫರ್ ಮರಣ ಹೊಂದಿದ್ದರಿಂದ ಆತನ ಮಗನಿಗೆ ವಿಶ್ರಾಂತಿ ವೇತನವನ್ನ ನೀಡಲಾಯಿತು ಇಷ್ಟು ಇದು ಬಕ್ಸಾರ್ ಕದನದ ಪರಿಣಾಮಗಳು ಈ ಪ್ರಶ್ನೆ ಬಹಳ ಮಹತ್ವದ್ದು ಏಕೆಂದರೆ ಅತಿ ಹೆಚ್ಚು ಬಾರಿ ಈ ಪ್ರಶ್ನೆಯನ್ನು ಕೂಡ ಪರೀಕ್ಷಾ ಮಂಡಳಿಯವರು ಕೇಳಿದ್ದಾರೆ ನಂತರ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯಲು ಪ್ರೇರಣೆ ನೀಡಿದ ಅಂಶಗಳು ಯಾವುವು ಈ ಪ್ರಶ್ನೆಯನ್ನು ಕೂಡ ಎಂಟು ಬಾರಿ ಕೇಳಲಾಗಿದೆ ಹೊಸ ಜಲಮಾರ್ಗ ಕಂಡುಹಿಡಿಯಲು

Timestamp 00:14:24 ಪ್ರೇರಣೆ ನೀಡಿದ ಅಂಶಗಳು ಯಾವುವು ಅಂತ ಅಂದ್ರೆ ಹೊಸ ವೈಜ್ಞಾನಿಕ ಅವಿಷ್ಕಾರಗಳಾಗಿರತಕ್ಕಂತ ದಿಕ್ಸೂಚಿ ಆಸ್ಟ್ರೋಲೋಪ್ ಸಿಡಿಮದ್ದು ಇವೇ ಅಂಶಗಳು ಹೊಸ ಜಲಮಾರ್ಗ ಕಂಡುಹಿಡಿಯಲು ಪ್ರೇರಣೆಯನ್ನು ನೀಡಿದವು ಹಾಗೆಯೇ ಪೂರ್ವ ದೇಶಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕಥೆಗಳು ಧರ್ಮ ಪ್ರಚಾರ ಮಾಡಬೇಕು ಅಂತಕಂತ ಹಂಬಲ ಈ ಎಲ್ಲಾ ಅಂಶಗಳು ಹೊಸ ಜಲಮಾರ್ಗ ಕಂಡುಹಿಡಿಯಲು ಪ್ರೇರಣೆಯನ್ನು ನೀಡಿದವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರ ಗಾಮಿಗಳು ಅವರ ಹೋರಾಟದ ಕುರಿತು ಬರೆಯಿರಿ ಅಂತಕಂತ ಒಂದು ಪ್ರಶ್ನೆಯನ್ನು ಎಂಟು ಬಾರಿ ಕೇಳಲಾಗಿದೆ ತೀವ್ರಗಾಮಿಗಳು ಅಂತ ಅಂದ್ರು ಒಂದೇ ಬಾಲಗಂಗಾಧರ ತಿಲಕರ ಪಾತ್ರ ಅಂತ ಕೇಳಿದರು ಕೂಡ ಒಂದೇ ಆನ್ಸರ್ ಅನ್ನು ಬರೀಬೇಕಾಗುತ್ತದೆ ಬಹಳ ಸರಳವಾಗಿ ಬರೀಬಹುದು

Timestamp 00:15:17 ಸ್ವಾತಂತ್ರ್ಯ ಹೋರಾಟದಲ್ಲಿ ಲಾಲಾ ಲಜಪತ್ ರಾಯ್ ಬಿಪಿನ್ ಚಂದ್ರಪಾಲ್ ಬಾಲಗಂಗಾಧರ್ ತಿಲಕರು ಪ್ರಮುಖರಾಗಿದ್ದರು ತೀವ್ರಗಾಮಿಗಳು ಮಂದಗಾಮಿಗಳನ್ನು ರಾಜಕೀಯ ಭಿಕ್ಷುಕರು ಎಂದು ಕರೆದರು ತೀವ್ರಗಾಮಿಗಳ ಗುರಿ ಸಂಪೂರ್ಣ ಸ್ವರಾಜ್ಯವನ್ನು ಪಡೆಯುವುದಾಗಿತ್ತು ತೀವ್ರಗಾಮಿಗಳು ಜನಸಾಮಾನ್ಯರನ್ನು ಸಂಘಟಿಸಿದರು ತೀವ್ರಗಾಮಿಗಳು ಸಾರ್ವಜನಿಕವಾಗಿ ಜನರನ್ನು ಸಂಘಟಿಸುವುದಕ್ಕಾಗಿ ಗಣೇಶ ಮತ್ತು ಶಿವಾಜಿ ಹಬ್ಬಗಳನ್ನು ಆಚರಿಸಿದರು ಬಂಗಾಳದ ವಿಭಜನೆಯನ್ನು ತೀವ್ರಗಾಮಿಗಳು ವಿರೋಧಿಸಿದರು ಸ್ವದೇಶಿ ಚಳುವಳಿಯನ್ನು ಆರಂಭಿಸಿದರು ಅದರ ಜೊತೆಗೆ ಹೋಂ ರೂಲ್ ಚಳುವಳಿಯನ್ನು ಕೂಡ ಆರಂಭಿಸಿದರು ಅನ್ನೋದು ಬಹಳ ಪ್ರಮುಖವಾಗಿರತಕ್ಕಂತದ್ದು ಹಾಗೆ ಭಯೋತ್ಪಾದನೆಯ

Timestamp 00:16:00 ಪರಿಣಾಮಗಳನ್ನು ತಿಳಿಸಿ ಎಂಟು ಬಾರಿ ಈ ಪ್ರಶ್ನೆಯನ್ನು ಕೇಳಲಾಗಿದೆ ಅಸಹಕಾರ ಚಳುವಳಿಯ ಕುರಿತು ಬರೆಯಿರಿ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳುವಳಿಯ ಕುರಿತು ಬರೆಯಿರಿ ಎಂಟು ಬಾರಿ ಈ ಪ್ರಶ್ನೆಯನ್ನು ಬರೆಯಲಾಗಿದೆ ಕೇಳಲಾಗಿದೆ ಹಾಗಾಗಿ ಈ ಪ್ರಶ್ನೆ ನೀವು ಎಲ್ಲಾ ಪ್ರಶ್ನೆಗಳನ್ನು ಅತಿ ಹೆಚ್ಚು ಬಾರಿ ಪರೀಕ್ಷಾ ಮಂಡಳಿಯವರು ಪುನರಾವರ್ತನೆ ಮಾಡಿರ್ತಕ್ಕಂತಹ ಪ್ರಶ್ನೆಗಳನ್ನು ಒಂದು ಕಡೆ ಬರೆದಿಟ್ಟುಕೊಂಡು ಇವುಗಳಿಗೆ ಉತ್ತರಗಳನ್ನು ಬರೆದು ನೀವು ಪದೇಪದೇ ಮನನ ಗಳನ್ನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ ನಂತರ ಬಹಳ ಪ್ರಮುಖವಾಗಿರತಕ್ಕಂತದ್ದು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ನಡುವಿನ ವ್ಯತ್ಯಾಸ ಅಂತ

Timestamp 00:16:45 ಹೇಳಿ ಪ್ರಶ್ನೆ ಕೇಳ್ತಾರೆ ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸ ಅಥವಾ ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು ಅಂತಕಂತ ಪ್ರಶ್ನೆಯನ್ನ ಕೇಳುತ್ತಾರೆ ಸಂಘಟಿತ ಕಾರ್ಮಿಕರು ಅಂದ್ರೆ ಕಾನೂನು ವ್ಯಾಪ್ತಿಗೆ ಒಳಪಟ್ಟಿರತಕ್ಕಂತವರು ರಜೆಯ ಸೌಲಭ್ಯವನ್ನ ಪಡಿತಕ್ಕಂತವರು ವಿರಾಮ ವೇತನವನ್ನ ಪಡಿತಕ್ಕಂತವರು ಕೆಲಸದ ಭದ್ರತೆ ಇರತಕ್ಕಂತವರು ನಿಗದಿತ ಸ್ಥಳದಲ್ಲಿ ಮಾತ್ರ ಕೆಲಸ ಮಾಡತಕ್ಕಂತವರು ನಿಗದಿತ ವೇತನ ಇರತಕ್ಕಂತವರು ವಿಮೆ ಮತ್ತು ವೈದ್ಯಕೀಯ ಸೌಲಭ್ಯವನ್ನ ಪಡಿತಕ್ಕಂತವರು ಇನ್ನು ಅಸಂಘಟಿತ ಕಾರ್ಮಿಕರು ಅಂದ್ರೆ ಕಾನೂನು ವ್ಯಾಪ್ತಿಗೆ ಒಳಪಡುವುದಿಲ್ಲ ರಜೆ ಸೌಲಭ್ಯವನ್ನು ಪಡೆದಿರುವುದಿಲ್ಲ ಇರುವುದೇ

Timestamp 00:17:30 ಇಲ್ಲ ಇವರಿಗೆ ಅಸಂಘಟಿತ ಕೆಲಸಗಾರರಿಗೆ ವಿರಾಮ ವೇತನವಿರುವುದಿಲ್ಲ ಕೆಲಸದ ಭದ್ರತೆ ಇರುವುದಿಲ್ಲ ನಿಗದಿತ ವೇತನವಿರುವುದಿಲ್ಲ ವಿಮೆ ಮತ್ತು ವೈದ್ಯಕೀಯ ಸೌಲಭ್ಯ ಕೂಡ ಇವರಿಗೆ ಇರುವುದಿಲ್ಲ ಹಾಗಾಗಿ ಈ ಪ್ರಶ್ನೆ ಬಹಳ ಸರಳವಾಗಿರತಕ್ಕಂತಹ ಪ್ರಶ್ನೆ ಎಂಟು ಬಾರಿ ಈ ಎಂಟು ಬಾರಿ ಈ ಪ್ರಶ್ನೆಯನ್ನು ಪರೀಕ್ಷಾ ಮಂಡಳಿಯವರು ಕೇಳಿದ್ದಾರೆ ಹಾಗಾಗಿ ಇದರ ಕಡೆಗೆ ಸ್ವಲ್ಪ ಗಮನವಿಡಿ ನಂತರ ಮಹಿಳಾ ಸ್ವಸಹಾಯ ಸಂಘಗಳ ಪ್ರಾಮುಖ್ಯತೆ ತಿಳಿಸಿ ಈ ಪ್ರಶ್ನೆಯನ್ನು ಕೂಡ ಎಂಟು ಬಾರಿ ಕೇಳಲಾಗಿದೆ ಸರ್ಕಾರದ ಆದಾಯದ ಮೂಲಗಳು ಯಾವುವು ಸರ್ಕಾರಕ್ಕೆ ಆದಾಯದ ಮೂಲಗಳು ಬಹಳಷ್ಟು ಇವೆ ವೈಯಕ್ತಿಕ ವ್ಯಕ್ತಿಯಾದರೆ ಆತನಿಗೆ ಕೆಲವೇ ಕೆಲವು ಆದಾಯದ ಮೂಲಗಳು ಇರುತ್ತವೆ ಸರ್ಕಾರಕ್ಕೆ ಬಹಳಷ್ಟು

Timestamp 00:18:19 ಆದಾಯದ ಮೂಲಗಳು ಇರುತ್ತವೆ ಹಾಗಾಗಿ ಸರ್ಕಾರಗಳು ಮೊದಲು ತನ್ನ ವೆಚ್ಚವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ತಮ್ಮ ಆದಾಯವನ್ನು ಹೊಂದಿಸಿಕೊಳ್ಳುತ್ತವೆ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳು ಇವುಗಳ ಬಗ್ಗೆ ನೀವು ಗಮನಹರಿಸಬೇಕು ಸರ್ಕಾರದ ಆದಾಯದ ಮೂಲಗಳು ಯಾವುವು ಅನ್ನೋದನ್ನ ನೀವು ಒಂದು ಕಡೆ ಬರೆದು ನೋಟ್ಸ್ ಮಾಡಿ ಇಟ್ಟುಕೊಳ್ಳಿ ಯಾಕಂದ್ರೆ ಈ ಪ್ರಶ್ನೆಯನ್ನ ಎಂಟು ಬಾರಿ ಕೇಳಲಾಗಿದೆ ಗ್ರಾಮೀಣ ಅಭಿವೃದ್ಧಿಯ ಮಹತ್ವ ತಿಳಿಸಿ ಈ ಪ್ರಶ್ನೆಯನ್ನು ಕೂಡ ಪರೀಕ್ಷಾ ಮಂಡಳಿಯವರು ಏಳು ಬಾರಿ ಕೇಳಿದ್ದಾರೆ ಹಾಗೆ ಚಂಡ ಮಾರುತ ಅನಾಹುತಕಾರಿ ಎಂಬುವುದನ್ನ ಸಮರ್ಥಿಸಿ ಚಂಡ ಮಾರುತದ ಪರಿಣಾಮಗಳನ್ನ ತಿಳಿಸಿ ಚಂಡ ಮಾರುತದ ಪರಿಣಾಮಗಳನ್ನು ತಿಳಿಸಿ

Timestamp 00:19:04 ಅಂತಂದ್ರೆ ನೀವು ಸಿಂಪಲ್ಲಾಗಿ ಕೆಲವೊಂದಿಷ್ಟು ಅಂಶಗಳನ್ನು ಬರೀಬೇಕಾಗುತ್ತದೆ ಜೀವಹಾನಿ ಆಸ್ತಿಪಾಸ್ತಿಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಕಟ್ಟಡಗಳಿಗೆ ದಕ್ಕೆಯನ್ನು ಉಂಟುಮಾಡುತ್ತದೆ ಬೆಳೆಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಸಾರಿಗೆ ಸಂಪರ್ಕ ಅಸ್ತವ್ಯಸ್ತವಾಗುತ್ತದೆ ವಿದ್ಯುತ್ ಸರಬರಾಜು ವಿದ್ಯುತ್ ಸರಬರಾಜಿಗೆ ಅಡಚಣೆಯಾಗುತ್ತದೆ ಸಾಂಕ್ರಾಮಿಕ ರೋಗಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತವೆ ಮುಂದಿನ ಪ್ರಶ್ನೆ ನಾಲ್ವಡಿ ಕೃಷ್ಣರಾಜು ಒಡೆಯರ ಸಾಧನೆಗಳು ಚಿಕ್ಕದೇವರಾಜು ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜು ಒಡೆಯರ ಸಾಧನೆಗಳ ಬಗೆಗೆ ತಿಳಿದುಕೊಳ್ಳಬೇಕು ಈ ಪ್ರಶ್ನೆಯನ್ನು ಏಳು ಬಾರಿ ಕೇಳಲಾಗಿದೆ ಬ್ರಿಟಿಷ್ ಕಂದಾಯ ನೀತಿಯ ಪರಿಣಾಮ

Timestamp 00:20:00 ಪರಿಣಾಮಗಳು ಯಾವುವು ಈ ಪ್ರಶ್ನೆಯನ್ನು ಕೂಡ ಅತಿ ಹೆಚ್ಚು ಬಾರಿ ಕೇಳಲಾಗಿದೆ ಬ್ರಿಟಿಷ್ ಕಂದಾಯ ನೀತಿಯ ಪರಿಣಾಮಗಳು ಯಾವುವು ಹಾಗಾಗಿ ಕಂದಾಯ ನೀತಿಯ ಪರಿಣಾಮಗಳು ಯಾವುವು ಶಿಕ್ಷಣದ ಪರಿಣಾಮಗಳು ಯಾವುವು ಅನ್ನೋದನ್ನ ತಿಳಿದುಕೊಂಡಿರಬೇಕು ಆರ್ಯ ಸಮಾಜದ ಸುಧಾರಣೆಗಳ ಕುರಿತು ಬರೆಯಿರಿ ಈ ಪ್ರಶ್ನೆಯನ್ನು ಆರು ಬಾರಿ ಕೇಳಲಾಗಿದೆ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ರವರ ಪಾತ್ರ ಅಥವಾ ಸಾಧನೆಯನ್ನು ತಿಳಿಸಿ ಈ ಪ್ರಶ್ನೆಯನ್ನು ಕೂಡ ಆರು ಬಾರಿ ಕೇಳಲಾಗಿದೆ ಗೋವಾವು ಪೋರ್ಚುಗೀಸರಿಂದ ಹೇಗೆ ವಿಮುಕ್ತಿ ಪಡೆಯಿತು ಆರು ಬಾರಿ ಕೇಳಲಾಗಿದೆ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಕೈಗೊಂಡ ಕ್ರಮಗಳೇನು ಈ ಪ್ರಶ್ನೆಯನ್ನು ಕೂಡ ಆರು ಬಾರಿ

Timestamp 00:20:47 ಕೇಳಲಾಗಿದೆ ವಿಶ್ವಸಂಸ್ಥೆಯ ಉದ್ದೇಶಗಳನ್ನು ತಿಳಿಸಿ ಈ ಪ್ರಶ್ನೆಯನ್ನು ಕೂಡ ಆರು ಬಾರಿ ಕೇಳಲಾಗಿದೆ ಹಾಗಾಗಿ ಇಂತಹ ಪ್ರಶ್ನೆಗಳ ಕಡೆಗೆ ಅತಿ ಹೆಚ್ಚು ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ ಅದೇ ರೀತಿಯಾಗಿ ಮುಂದಿನ ಪ್ರಶ್ನೆ ಪರ್ಯಾಯ ಪ್ರಸ್ಥ ಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ ಏಕೆ ನೋಡ್ರಿ ಪರ್ಯಾಯ ಪ್ರಸ್ಥ ಭೂಮಿಯು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಆರ್ಥಿಕವಾಗಿ ಪಡೆದಿದೆ ಹೇಗೆಂದರೆ ಬೆಟ್ಟ ಗುಡ್ಡಗಳಿಂದ ಕೂಡಿದೆ ಬೆಟ್ಟ ಗುಡ್ಡಗಳನ್ನು ಹೊಂದಿರುವುದರಿಂದ ಜಲಪಾತಗಳು ಸೃಷ್ಟಿಯಾಗಿವೆ ಅತಿ ಹೆಚ್ಚು ಜಲಪಾತಗಳು ಪರ್ಯಾಯ ಪ್ರಸ್ಥ ಭೂಮಿಯಲ್ಲಿ ಕಂಡುಬರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಸಹಾಯಕವಾಗಿದೆ

Timestamp 00:21:36 ದಟ್ಟಾರಣ್ಯವಿದ್ದು ಕಾಡು ಮೃಗಗಳ ವಾಸಸ್ಥಾನವಾಗಿದೆ ಅಪಾರ ಪ್ರಮಾಣದ ಖನಿಜವಿದೆ ಕಪ್ಪು ಮಣ್ಣಿದ್ದು ಹತ್ತಿ ಬೆಳೆಯಲು ಸೂಕ್ತವಾಗಿದೆ ಹೀಗೆ ಕೆಲವೊಂದಿಷ್ಟು ಅಂಶಗಳನ್ನು ನೀವು ಬರೆಯಬೇಕಾಗುತ್ತದೆ ಭಾರತದಲ್ಲಿ ಸಾರಿಗೆಯ ಮಹತ್ವವನ್ನು ವಿವರಿಸಿ ಆರು ಬಾರಿ ಪ್ರಶ್ನೆಯನ್ನು ಕೇಳಲಾಗಿದೆ ಉದ್ಯಮಿಯ ಕಾರ್ಯಗಳನ್ನು ತಿಳಿಸಿ ಈ ಪ್ರಶ್ನೆಯನ್ನು ಕೂಡ ಪರೀಕ್ಷಾ ಮಂಡಳಿಯವರು ಆರು ಬಾರಿ ಕೇಳಿದ್ದಾರೆ ಅಂಚೆ ಕಚೇರಿಗಳು ಒದಗಿಸುವ ಸೇವೆಗಳು ಯಾವುವು ಈ ಪ್ರಶ್ನೆಯನ್ನು ಕೂಡ ಆರು ಬಾರಿ ಕೇಳಲಾಗಿದೆ ಗ್ರಾಹಕರ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶಗಳೇನು ಈ ಪ್ರಶ್ನೆಯನ್ನು ಕೂಡ ಆರು ಬಾರಿ ಕೇಳಲಾಗಿದೆ ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆ ತಿಳಿಸಿ

Timestamp 00:22:24 ನೋಡ್ರಿ ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆ ತಿಳಿಸಿ ಈ ಪ್ರಶ್ನೆ ಕೂಡ ಐದು ಬಾರಿ ಕೇಳಿದ್ದಾರೆ ಹಾಗಾಗಿ ಬಹಳ ಪ್ರಮುಖವಾಗಿರತಕ್ಕಂತ ಪ್ರಶ್ನೆ ವ್ಯವಸಾಯದ ಪ್ರಾಮುಖ್ಯತೆ ಅಂತಂದ್ರೆ ಉದ್ಯೋಗದ ಸೃಷ್ಟಿಯಾಗುತ್ತದೆ ತಲಾ ಆದಾಯ ಹೆಚ್ಚುತ್ತದೆ ರಾಷ್ಟ್ರೀಯ ಆದಾಯ ಹೆಚ್ಚುತ್ತದೆ ಜನರ ಜೀವನ ಮಟ್ಟ ಸುಧಾರಿಸುತ್ತದೆ ವಿದೇಶ ವಿನಿಮಯ ಗಳಿಸುತ್ತದೆ ಮೂರು ವಲಯಗಳ ಅಭಿವೃದ್ಧಿಗೆ ಸಹಾಯಕವಾಗಿದೆ ಮುಂದಿನ ಪ್ರಶ್ನೆ ಭಾರತದಲ್ಲಿ ಅನುಸರಿಸುತ್ತಿರುವ ಇರುವ ಕೃಷಿ ವಿಧಗಳು ಯಾವುವು ಐದು ಬಾರಿ ಕೇಳಲಾಗಿದೆ ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು ಈ ಪ್ರಶ್ನೆಯನ್ನು ಕೂಡ ಐದು ಬಾರಿ ಕೇಳಲಾಗಿದೆ ಭಾರತದ ವ್ಯವಸಾಯ ಮಾನ್ಸೂನ್ ಜೊತೆಗೆ

Timestamp 00:23:15 ಆಡುವ ಜೂಜಾಟವಾಗಿದೆ ಎಂಬುವುದನ್ನು ಸಮರ್ಥಿಸಿ ಈ ಪ್ರಶ್ನೆಯನ್ನು ಕೂಡ ಐದು ಬಾರಿ ಕೇಳಲಾಗಿದೆ ಬಹಳ ಸರಳವಾಗಿರತಕ್ಕಂತ ಪ್ರಶ್ನೆ ಭಾರತದ ವ್ಯವಸಾಯವು ಮಾನ್ಸೂನ್ ಜೊತೆಗೆ ಆಡುವ ಜೂಜಾಟವಾಗಿದೆ ಅಂದ್ರೆ ಭಾರತದ ವ್ಯವಸಾಯವನ್ನ ವ್ಯವಸಾಯವನ್ನು ಮಾನ್ಸೂನ್ ಮಾರುತಗಳು ಒಂದು ವಿಧದಲ್ಲಿ ಒಂದು ರೀತಿಯಲ್ಲಿ ನಿಯಂತ್ರಿಸುತ್ತವೆ ಅತಿ ಹೆಚ್ಚು ಮಳೆಯಾದರೆ ಪ್ರವಾಹ ಉಂಟಾಗುತ್ತದೆ ಬೆಳೆ ನಾಶವಾಗುತ್ತದೆ ಮಳೆಯಾಗದೆ ಹೋದರೆ ಬರಗಾಲ ಉಂಟಾಗುತ್ತದೆ ಅಂದ್ರೆ ಈ ಮಾನ್ಸೂನ್ ಮಾರುತಗಳು ರೈತನೊಡನೆ ಜೂಜಾಟವಾಡುತ್ತಿವೆ ಮುಂದಿನ ಪ್ರಶ್ನೆ ಮರ್ತಂಡವರ್ಮನು ಭಾರತದಲ್ಲಿ ಡಚ್ಚರನ್ನು ಹೇಗೆ ನಿಯಂತ್ರಿಸಿದನು ಈ ಪ್ರಶ್ನೆಯನ್ನು ಕೂಡ ಐದು ಬಾರಿ ಕೇಳಲಾಗಿದೆ

Timestamp 00:24:05 ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಐದು ಬಾರಿ ಕೇಳಲಾಗಿದೆ ಒಟ್ಟಾರೆಯಾಗಿ ಈ ಪರೀಕ್ಷಾ ಮಂಡಳಿಯವರು ಅತಿ ಹೆಚ್ಚು ಬಾರಿ ಪುನರಾವರ್ತಿತ ಈ 40 ಪ್ರಶ್ನೆಗಳನ್ನು 2015 ರಿಂದ 2024 ರವರೆಗೆ ಕೇಳಿದ್ದಾರೆ ಹಾಗಾಗಿ 40 ಪ್ರಶ್ನೆ ಪ್ರಶ್ನೆಗಳನ್ನ ನಾವು ಒಂದು ಕಡೆ ಬರೆದಿಟ್ಟುಕೊಂಡು ಇವುಗಳಿಗೆ ಉತ್ತರಗಳನ್ನು ಸರಿಯಾದ ರೀತಿಯಲ್ಲಿ ಬರೆದುಕೊಂಡು ಪ್ರತಿದಿನ ಇವುಗಳ ಕಡೆ ನಾವು ಗಮನಹರಿಸಿದ್ದೇವೆ ಅಂತಂದ್ರೆ ಅತಿ ಸುಲಭವಾಗಿ ನಾವು ಸ್ಕೋರ್ ಅನ್ನ ಮಾಡಬಹುದು ಈ ಸಂದರ್ಭದಲ್ಲಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಯಾರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಪ್ರಯತ್ನವನ್ನು ಮಾಡಿ ಯಶಸ್ಸನ್ನ

Timestamp 00:25:02 ಕಾಣುವಂತವಂತಾಗ್ರಿ ಅಂತ ಹೇಳ್ತಾ ನನ್ನ ಈ ಒಂದು ವಿಡಿಯೋವನ್ನ ಮುಗಿಸ್ತಾ ಇದ್ದೀನಿ ಥ್ಯಾಂಕ್ಯು.

Educational Disclaimers:

Here often used on YouTube, Websites, Online Courses, or Study Materials, state that information provided is for informational and educational purposes only, and does not constitute professional advice. They also typically clarify that the provider is not responsible for any actions taken based on the information, and that readers should consult with professionals for specific needs.


ಶೈಕ್ಷಣಿಕ ಹಕ್ಕು ನಿರಾಕರಣೆಗಳು:

ಇಲ್ಲಿ ಹೆಚ್ಚಾಗಿ ಯೂಟ್ಯೂಬ್‌, ವೆಬ್‌ಸೈಟ್‌ಗಳು, ಆನ್‌ಲೈನ್ ಕೋರ್ಸ್‌ಗಳು ಅಥವಾ ಅಧ್ಯಯನ ಸಾಮಗ್ರಿಗಳಲ್ಲಿ ಬಳಸಲಾಗುವ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ಸಲಹೆಯನ್ನು ರೂಪಿಸುವುದಿಲ್ಲ ಎಂದು ಹೇಳುತ್ತದೆ. ಮಾಹಿತಿಯ ಆಧಾರದ ಮೇಲೆ ತೆಗೆದುಕೊಂಡ ಯಾವುದೇ ಕ್ರಮಗಳಿಗೆ ಪೂರೈಕೆದಾರರು ಜವಾಬ್ದಾರರಲ್ಲ ಮತ್ತು ಓದುಗರು ನಿರ್ದಿಷ್ಟ ಅಗತ್ಯಗಳಿಗಾಗಿ ವೃತ್ತಿಪರರೊಂದಿಗೆ ಸಮಾಲೋಚಿಸಬೇಕು ಎಂದು ಅವರು ಸಾಮಾನ್ಯವಾಗಿ ಸ್ಪಷ್ಟಪಡಿಸುತ್ತಾರೆ.


[Source: All product name and subject names, images and displayed/provided brands are property of their respective owners images, logos and trademark belongs to the respective original owners. | ಮೂಲ: ಎಲ್ಲಾ ಉತ್ಪನ್ನ ಹೆಸರು ಮತ್ತು ವಿಷಯದ ಹೆಸರುಗಳು, ಚಿತ್ರಗಳು ಮತ್ತು ಪ್ರದರ್ಶಿಸಲಾದ/ಒದಗಿಸಲಾದ ಬ್ರ್ಯಾಂಡ್‌ಗಳು ಆಯಾ ಮಾಲೀಕರ ಆಸ್ತಿಯಾಗಿದ್ದು, ಚಿತ್ರಗಳು, ಲೋಗೋಗಳು ಮತ್ತು ಟ್ರೇಡ್‌ಮಾರ್ಕ್ ಆಯಾ ಮೂಲ ಮಾಲೀಕರಿಗೆ ಸೇರಿದೆ.]


Follow us on over social links | ಸಾಮಾಜಿಕ ಲಿಂಕ್‌ಗಳಲ್ಲಿ ನಮ್ಮನ್ನು ಅನುಸರಿಸಿ :-

YouTube: youtube.com/@studyguru1983
Facebook: facebook.com/studyguru1983
Instagram: instagram.com/studyguru1983
Twitter: twitter.com/studyguru1983
Telegram: t.me/studyguru1983
WhattsApp Group: studyguru1983


Was this helpful to you? | ಇದು ನಿಮಗೆ ಸಹಾಯಕವಾಗಿದೆಯೇ?



Contact Us | ನಮ್ಮನ್ನು ಸಂಪರ್ಕಿಸಿ:

Thank you for visiting our site. If you have any query or question regarding aforesaid topic so please comment below. | ನಮ್ಮ ಸೈಟ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ಮೇಲೆ ತಿಳಿಸಿದ ವಿಷಯದ ಕುರಿತು ನಿಮಗೆ ಯಾವುದೇ ಪ್ರಶ್ನೆಗಳು ಅಥವಾ ಪ್ರಶ್ನೆಗಳಿದ್ದರೆ ದಯವಿಟ್ಟು ಕೆಳಗೆ ಕಾಮೆಂಟ್ ಮಾಡಿ.

Home

For your feedback | ನಿಮ್ಮ ಪ್ರತಿಕ್ರಿಯೆಗಾಗಿ Contact Us


Thank You | ಧನ್ಯವಾದಗಳು.


[Last Updated | ಕೊನೆಯದಾಗಿ ನವೀಕರಿಸಲಾಗಿದೆ : ]

Tags:

Post a Comment

0Comments

Don not comment any link or abuse word!

Post a Comment (0)

#buttons=(Ok, Yes) #days=(20)

Our website uses cookies to enhance your experience. Check Now
Ok, Go it!